Thursday, August 25, 2011


ಫ್ರೀಡಂ ಪಾರ್ಕ್ ನಲ್ಲಿ

ಮಾತನಾಡದೆ ಬಿಟ್ಟದ್ದು....

ಮಾನ್ಯ ಭ್ರಷ್ಟಾಚಾರ ವಿರೋಧಿ ಬಂಧುಗಳೇ,

'ಕರಪ್ಶನ್ ಈಸ್ ಪಾರ್ಟ್ ಆಫ್ ಅವರ್ ಲೈಫ್' - ಈ ಸಂದರ್ಭದಲ್ಲಿ ನನ್ನ ಗೆಳೆರೊಬ್ಬರ ಆಡಿದ ಮಾತು ಕಿವಿಗಪ್ಪಳಿಸುತ್ತಿದೆ! ನಾನು ನಮ್ಮ ಎಪಾರ್ಟ ಮೆಂಟ್ ನ 24 ಮನೆಗಳ ಕಾತ ಮಾಡಲು ಮುಂದಾಳುತನ ವಹಿಸಿದ್ದೆ. ಲಂಚ ಕೊಡದೆ ಕಾತ ಸಿಗುವ ಪ್ರಮೇಯವೇ ಇರಲಿಲ್ಲ. ಆದರೂ ನಾನು 'ಅಣ್ಣಾ ಇಸಂ' ತೋರಿಸುವುದಕ್ಕೆ ಹೊರಟಿದ್ದೆ. ಒಳ್ಳೆಯ ಶುಭಲಕ್ಷಣ ನೋಡಿ, ಬಿಬಿಎಂಪಿಯ ಬಾಗಿಲಿಗೆ ಬಲಗಾಲಿಟ್ಟು ಪ್ರವೇಶಿಸೋಣವೆಂದು ಹೋರಟರೆ ನನ್ನ ಹಿಂದೆ ಯಾರೂ ಇರಲಿಲ್ಲ! ಆಗ ನನಗೆ ಸಿಕ್ಕಿದ ಪ್ರತಿಕ್ರಿಯೆ 'ಕರಪ್ಶನ್ ಈಸ್ ಪಾರ್ಟ್ ಆಫ್ ಅವರ್ ಲೈಫ್ ಸ್ವಾಮಿ ! ಸಮ್ತಿಂಗ್ ಕೊಟ್ಟು ಒಮ್ಮೆ ಕಾತಾ ಮಾಡಿಸಿಬಿಡೋಣ'

ನೀವೆಲ್ಲ ಗಮನಿಸಬೇಕು. ಇದು ನಡೆದದ್ದು ನಮ್ಮ ರಾಜ್ಯದಲ್ಲಿ ಲೋಕಾಯುಕ್ತ ಜೀವಂತ ಇರುವಾಗಲೇ! ಆಗಾಗ ಟಿವಿ, ಪತ್ರಿಕೆಗಳಲ್ಲಿ ಹೆಗ್ಡೆ0ುವರ ಬಲೆಗೆ ಬೀಳುತ್ತಿದ್ದ ತಿಮಿಂಗಿಲಗಳ ಸುದ್ದಿ ನಮ್ಮ 24 ಮನೆಗಳಿಗೂ ಗೊತ್ತಿದೆ. ಆದರೂ ಇವರೆಲ್ಲ ಅಸಹಾ0ಕರು. ನಾಳೆ ಲೋಕಪಾಲ್ ಬಂದರೂ ಇವರ ಜಡತ್ವ ಹೀಗೇ ಇರುತ್ತದೆ. ಇದು ಈ 24 ಮನೆಗಳ ಅವಸ್ಥೆ0ುಲ್ಲ. ಕರ್ನಾಟಕದ ಮನೆ ಮನೆ ಕತೆಯ ಇದೇ. ಹೆಗ್ಡೆ, ಅಣ್ಣಾ ಹಝಾರೆ ಎಂದರೆ ಹೆಮ್ಮೆ ಪಡುವ ನಾವು ಜನನದಿಂದ ಮರಣದ ವರೆಗೆ [ ಬರ್ತ್-ಡೆತ್ತ್ ಸರ್ಟಿಫಿಕೇಟ್ ] ಲಂಚವನ್ನು ಸಂಪ್ರದಾ0ುವೆಂಬಂತೆ ಪಾಲಿಸುತ್ತಿದ್ದೇವೆ !

'ಅಣ್ಣಾ ಹಝಾರೆ, ನಾವು ನಿಮ್ಮೊಂದಿಗಿದ್ದೇವೆ!' ಎಂದು ನೀವೆಲ್ಲ ಬಹಳ ಹುಮ್ಮಸ್ಸಿನಿಂದ ಕೂಗುವಾಗ ನಿಮ್ಮ ಮುಷ್ಟಿ ಗಟ್ಟಿ0ಾಗುವುದನ್ನು ನೋಡಿದ್ದೇನೆ. ಕುತ್ತಿಗೆ0ು ನರಗಳು

ಮೇಲೇರುವುದನ್ನು ನೋಡಿದ್ದೇನೆ. ಆದರೆ 'ಅಣ್ಣಾ-ಂದಿರೇ, ಕರ್ನಾಟಕ ರಾಜ್ಯ ಭ್ರಷ್ಟಾಚಾರದಲ್ಲಿ ಕಳೆದ ಕೆಲವು ವರ್ಷಗಳಿಂದ ಇಡೀ ದೇಶದಲ್ಲೇ ಪ್ರಥಮ ಸ್ಥಾನದಲ್ಲಿರುವಾಗ ನಿಮಗದು ಹೇಸಿಗೆ ಅನಿಸಿಲ್ಲವೇಕೆ ? ಇದೊಂದು ಅತ್ಯಂತ ಅವಮಾನಕಾರಿ ಸಂಗತಿಯಾಗಿರುವಾಗ ಫ್ರೀಡಂ ಪಾರ್ಕನಲ್ಲಿ ಬಹಳ ಹಿಂದೆ0ೆು ನಿಮ್ಮ ರೋಷ ಉಕ್ಕೇರಬೇಕಾಗಿತ್ತು. ಪಾಪ, ಸಂತೋಷ್ ಹೆಗ್ದೆ0ುವರು ' ಹೆಚ್ಚು ಅಧಿಕಾರ ಕೊಡಿ,ಏನ್ ಮಾಡ್ತೀವಿ ನೋಡಿ!' ಎಂಬ ಮಂತ್ರ ಜಪಿಸಿದ್ದೇ ಬಂತು.

ಆಗ ಅವರ ಬೆಂಬಲಕ್ಕೆ ನಿಂತು ಅಮರಣಾಂತ ಉಪವಾಸ ಹೂಡುವ 'ಗಾಂಧೀಜಿ'ಗಳೇ ಇರಲಿಲ್ಲವಲ್ಲ !

ಅಲ್ರೀ, ಈ ವರೆಗೆ ಲೋಕಾಯುಕ್ತ ಬಲೆ0ುಲ್ಲಿರುವ ಶೇಕಡಾ 86 ರಷ್ಟು ನುಂಗಣ್ಣರಿಗೆ ಇನ್ನೂ ಶಿಕ್ಷೆ0ಾಗಿಲ್ಲವಂತೆ! ನಮ್ಮ ಸರ್ಕಾರಿ ಬಾಬುಗಳಿಗೆ ಭ್ರಷ್ಟಾಚಾರ ಶಿಕ್ಷಾರ್ಹ ಅಪರಾಧ ಅಲ್ಲ ಎಂದು ಗೊತ್ತಾಗಲು ಇಷ್ಟು ಸಾಕಲ್ಲವೆ ! ಬಹುಶಃ ಭ್ರಷ್ಟಾಚಾರ ತಡೆಗಟ್ಟಲು ಒಂದೇ ಪರಿಹಾರ- ಕಠಿಣ ಶಿಕ್ಷೆ. ಅಂದರೆ 7ವರ್ಷಗಳಿಂದ ಜೀವಾವಧಿ ಜೈಲುವಾಸ. ಇದು ಅಣ್ಣಾ ಮಸೂದೆ0ುಲ್ಲಿದೆ. ಆದರೆ ಅಣ್ಣಾ ಮಸೂದೆ0ುಲ್ಲಿ ಕೋಟಿಗಿಂತ ಮೇಲೆ ಮುಟ್ಟಿದವರಿಗೆ ನೇರ ಮೇಲೆ ಕಳಿಸುವ ಅಂದರೆ ನೇಣಿನ ಶಿಕ್ಷೆ0ಾಗಬೇಕು ಅನ್ನುವುದನ್ನು ಸೇರಿಸಬೇಕಾಗಿತ್ತು. ಇಂತಹ ಶಿಕ್ಷೆಯಿರದಿದ್ದುದ್ದರಿಂದಲೇ ಲಾಲು, 0ುಲಲಿತಾರಂತಹವರು ಜೈಲುವಾಸದ 'ಪಿಕ್ನಿಕ್' ಮುಗಿಸಿ ಮತ್ತೆ ಜನರ ಮುಂದೆ ಹಲ್ಲು ಕಿಸಿ0ುುತ್ತಾರೆ. ಭ್ರಷ್ಟಾಚಾರಿಗಳಿಗೆ ಹೊಸ ಲೋಕಪಾಲ್ ಮಸೂದೆ, ಯಮಲೋಕಪಾಲ್ ಮಸೂದೆ ಅನಿಸಿದಾಗ ಮಾತ್ರ ಅಣ್ಣಾಜೀ0ು ಕನಸು ನನಸಾಗಬಹುದೇನೋ!

ಈ ಲಂಚ ವಿರೋಧಿ ಮನೋಭಾವ ನಮ್ಮ ಮನೆಯಿಂದ ಮೊದಲು ಆರಂಭವಾಗಬೇಕು.'ಲಂಚದಿಂದ ದೂರ ಇರು' ಎಂದು ಅಪ್ಪ ಮಗನಿಗೆ ಹೇಳುವಂತಾಗಬೇಕು. ಮಗ ಭ್ರಷ್ಟ ಅಪ್ಪನನ್ನು ಹೀ0ಾಳಿಸಬೇಕು. ಹಣದ ಸೂಟ್ಕೇಸ್ ನೊಂದಿಗೆ ಬರುವ ಗಂಡನಿಗೆ ಹೆಂಡತಿ 'ಥೂ!' ಅನ್ನಬೇಕು. ಭ್ರಷ್ಟಾಚಾರ ಮನೋಭಾವ ನಿಮ್ಮ ಅಪಾರ್ಟ್ ಮೆಂಟ್ ನಲ್ಲಿ ಬೆಳೆಸೋಣ. ನಿವಾಸಿಗಳ ಸಂಘಟನೆಗಳು ಈ ಕೆಲಸ ಮಾಡಬಹುದಲ್ಲ? ಇವತ್ತು ಜ0ುನಗರ, ನಾಳೆ ರಾಜಾಜಿನಗರ... ಮಾದರಿ ಮನೆ, ಮಾದರಿ ನಗರ, ಮಾದರಿ ಜಿಲ್ಲೆ. ನಮ್ಮ ಕರ್ನಾಟಕ ಮಾದರಿ ರಾಜ್ಯವಾಗಬಾರದೇಕೆ?

ಸಂತೋಷ್ ಹೆಗ್ದೆ0ುವರು ತಮ್ಮ ಅವಧಿ ಕಾಲದಲ್ಲಿ ನೀವು ಅಷ್ಟಾಗಿ ಗಮನಿಸದ ಒಂದು ಒಳ್ಳೆ0ು ಕೆಲಸ ಮಾಡುತ್ತಿದ್ದರು.ಅವರು ಮಾಡುತ್ತಿದ್ದುದು -ಶಾಲಾ ಕಾಲೇಜುಗಳಿಗೆ ಹೋಗಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವ ಪ್ರ0ುತ್ನ. ನಮ್ಮ ರಾಜ್ಯದಲ್ಲಂತೂ ಈ ಕಾರ್ಯ ತುರ್ತಾಗಿ ಆಗಬೇಕಾಗಿದೆ. 0ಾಕೆಂದರೆ ನಮ್ಮ ಮಕ್ಕಳಿಗೆ ನಾಳೆ ಭ್ರಷ್ಟಾಚಾರ 'ಪಾರ್ಟ್ ಆಫ್ ಅವರ್ ಲೈಫ್' ಅನಿಸಬಾರದು. ಹಝಾರೆ ಬೆಂಬಲಕ್ಕೆ ಹಝಾರ್ ಹಝಾರ್ ಸಂಖ್ಯೆ0ುಲ್ಲಿ ಮಕ್ಕಳು ನಿಂತಿರಬಹುದು. ಅವರನ್ನೆಲ್ಲರನ್ನೂ ನಂಬಬೇಡಿ! ಈಗಿನ ಹೆತ್ತವರು, ಶಾಲೆ, ಕಾಲೇಜು, ಬದುಕಿನ ಅನಿಷ್ಟ ವಾತಾವರಣ ನೋಡಿದರೆ ಇಂದಿನ ತಲೆಮಾರು ಮುಂದೆ ಕಡು ಭ್ರಷ್ಟರಾಗುವ ಸಾಧ್ಯತೆಗಳಿವೆ! ಲಂಚ ಕೊಟ್ಟು ನಕಲು ಹೊಡೆ0ುುವ ಸೌಕರ್ಯ ನಮ್ಮಲ್ಲಿದೆ! ಲಂಚ ನೀಡಿದರೆ ನಾಪಾಸು ಆದವ 'ನಾನು ಪಾಸು ಆಗುತ್ತಾನೆ! ಫೀಸು ರೂಪದಲ್ಲಿ ಡೊನೇಶನ್ ಕಬಳಿಸುವ ವಿಧ್ಯಾಸಂಸ್ಥೆಗಳು ಬೇರೆ ಇವೆ. ಇಂದಿನ ಮಕ್ಕಳ ತಲೆ0ುಲ್ಲಿ ಭ್ರಷ್ಟಾಚಾರ ತುಂಬಲು ಇಷ್ಟು ಸಾಲದೆ ? ನಮ್ಮ ಶಾಲೆ, ಕಾಲೇಜುಗಳಲ್ಲಿ ನೀತಿ ಭೋದನೆ ಒಂದು ಪಠ್ಯ ಪುಸ್ತಕವಾಗಿ ಕಡ್ಡಾ0ುವಾಗಬೇಕಾಗಿದೆ.

'ಸರಕಾರದ ಕೆಲಸ ದೇವರ ಕೆಲಸ' ಎಂಬುದು 0ಾವ ಪುಣ್ಯಾತ್ಮನ ಘ್ಹೋಷವಾಕ್ಯವೋ!

ಅದನ್ನೇ ಸರಕಾರಿ ನೌಕರರೆಲ್ಲಾ ಚಾಚು ತಪ್ಪದೆ ಪಾಲಿಸುತ್ತಿದ್ದಾರೆ ನೋಡಿ! ದೇವರ ಕೆಲಸ, ಕಾಣಿಕೆ ಹಾಕಲೇಬೇಕು. ಹಾಗೆಂದು ಈ ದರಿದ್ರ ಭ್ರಷ್ಟಾಚಾರ ಬರೀ ಸರ್ಕಾರಿ ಕಚೇರಿಗಳಿಗೆ ಸೀಮಿತವಾಗಿಲ್ಲ. ಅದು ಕಾಪರ್ೊರೆಟ್ ಆಫೀಸ್ ಗಳಲ್ಲೂ ತಾಂಡವವಾಡುತ್ತಿದೆ . ಹಣ ದೊಚುವುದಕ್ಕೆಂದೇ ಆಸ್ಪತ್ರೆಗಳು ಹುಟ್ಟಿಕೊಂಡಿವೆ. ಪತ್ರಿಕಾ ಸಂಪಾದಕರುಗಳೇ ಚೆನ್ನಾಗಿ 'ಸಂಪಾದನೆ' ಮಾಡುತ್ತಿದ್ದಾರೆ ಅಂದ ಮೇಲೆ!

ವಾಸ್ತವ ಏನೇ ಇರಲಿ, ನಮ್ಮಲ್ಲಿ ಈಗ ನಾ0ುಕನೊಬ್ಬನ ಉದ0ುವಾಗಿರುವುದು ಓ0ುಸಿಸ್ ನಲ್ಲಿ ನೀರು ಸಿಕ್ಕಿದಂತಾಗಿದೆ. ಅಣ್ಣಾ ಹಝಾರೆ0ು ಲೋಕಪಾಲ್ ಮಸೂದೆ0ುನ್ನು 0ಾವತ್ತೋ ಒಪ್ಪಿಕೊಡಿದ್ದಿದ್ದರೆ ನಮ್ಮ ಪ್ರಧಾನ ಮಂತ್ರಿ0ುವರು 'ಸಿಂಗ್ ಈಸ್ ಕಿಂಗ್' ಅನಿಸಿಕೊಳ್ಳುತ್ತಿದ್ದರೇನೋ ! ಕೇಂದ್ರ ಸಚಿವರಂತೂ ಹತಾಶರಾಗಿ 'ಒಂದಿಬ್ಬರು ಸೇರಿ ಸರಕಾರವನ್ನು ಆಡಿಸುತ್ತಿರುವುದು ಪ್ರಜಾಪ್ರಭುತ್ವವಲ್ಲ' ಎಂಬ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ. ಮಂಕ, ಮಡೇ0ುರಿಗೂ ಜನಾಂದಲೋನದ ಅರ್ಥ ತಿಳಿದಿರುವಾಗ ಇವರು ನೋಡಿ!

ಈಗ ನಮ್ಮ ಫ್ಲಾಟ್ ನಲ್ಲಿ 0ುುವಕನೊಬ್ಬ '0ಾಮ್ ಅಣ್ಣಾ ಹಝಾರೆ' ಎಂದು ಬರೆದಿರುವ ಟೀ-ಶರ್ಟ್ ಹಾಕಿಕೊಂಡಿದ್ದಾನೆ. ಈ 0ುುವಕ ಬೇರಾರೂ ಅಲ್ಲ. ಒಂದೊಮ್ಮೆ 'ಕರಪ್ಶನ್ ಈಸ್ ಪಾರ್ಟ್ ಆಫ್ ಅವರ್ ಲೈಫ್' ಅಂದಿದ್ದ ಗೆಳೆ0ುನ ಮಗ.

*ಪ್ರಕಾಶ್ ಶೆಟ್ಟಿ

ವ್ಯಂಗ್ಯಚಿತ್ರಕಾರರು



No comments: